ಗೋವಾ ಕಡೆಯಿಂದ ಕಾರವಾರವನ್ನು ಪ್ರವೇಶಿಸುವಾಗ ಸಿಗುವ ಕಾಳಿ ನದಿಯ ತೀರದಲ್ಲಿ ನಿಂತಿರುವ ಎತ್ತರದ ಗುಡ್ಡೆ ಮೇಲಿರುವುದೆ ಸದಾಶಿವಗಡ ಕೋಟೆ. ಈ ಗುಡ್ಡೆಯನ್ನು ಸೀಳಿಕೊಂಡೆ ಹೆದ್ದಾರಿ ಸಾಗಿದೆ. ಈಗ್ ಖಾಸಗಿ ರೆಸಾರ್ರ್ಟ್ ಆಗಿರುವ ಈ ಕೋಟೆಗೆ ಬಹುದೊಡ್ಡ ಇತಿಹಾಸವಿದೆ ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಾರದು.
ಪೋರ್ಛುಗೀಸರ ದಾಖಲೆಗಳಲ್ಲಿ ಈ ಕೋಟೆಯ ಹೆಸರು ”ಪೀರ್ ಕೋಟೆ’. ಕಾರಣವೇನೆಂದರೆ ಶಾ ಶಂಶುದ್ದೀನ್ ಖರ್ಬತ್ ಎಂಬ ಸಂತನೊಬ್ಬ ಇಲ್ಲಿ ನೆಲೆಸಿದ್ದ. ಅವನ ಹೆಸರಿನ ದರ್ಗಾ ಕೂಡಾ ಇಲ್ಲಿದೆ.
ಬಿಜಾಪುರ ಸುಲ್ತಾನರ ಪತ್ನದ ನಂತರ ಈ ಪ್ರದೇಶ ಸೋಂದಾ ರಾಜರ ನಿಯಂತ್ರಣಕ್ಕೆ ಬಂತು. ೧೭೧೫ರಲ್ಲಿ ಬಸವಲಿಂಗ ರಾಜ ಅರೆನಾಶವಾಗಿದ್ದ ಕೋಟೆಯನ್ನು ಮರುನಿರ್ಮಾಣ ಮಾಡಿ, ಅದಕ್ಕೆ ತನ್ನ ತಂದೆಯ ನೆನಪನಲ್ಲಿ ’ಸದಾಶಿವಗಡ ಕೋಟ” ಎಂದು ಮರುನಾಮಕರಣ ಮಾಡಿದ. ಹ್ಯೆದರಾಲಿ ಮತ್ತು ಟಿಪ್ಪುವಿನ ಆಕ್ರಮಣ ಮತ್ತು ಆಳ್ವಿಕೆಗೂ ಈ ಕೋಟೆ ಒಳಪಟ್ಟಿತ್ತು. ಅಂತಿಮವಾಗಿ ೧೭೯೯ರಲ್ಲಿ ಇದು ಬ್ರಿಟೀಶರ ಆಳ್ವಿಕೆಗೆ ಬಂತು.
ಕುಸಿದುಬಿದ್ದಿರುವ ಕೋಟೆಯನ್ನು ಮತ್ತು ಪಿರಂಗಿಗಳ ಪಳೆಯುಳಿಕೆಗಳನ್ನು ಸದಾಶಿವಗಡ ಗುಡ್ಡೆಯ ಮೇಲೆ ಈಗಲೂ ಕಾಣಬಹುದು. ಅಲ್ಲಿಂದ ಕಾಣುವ ಕಾಳಿನದಿಯ ಮತ್ತು ಕಾರವಾರ ಕಡಲತೀರದ ನೋಟ ಅದ್ಭುತವಾದದ್ದು. ನೀವು ಕಾರವಾರಕ್ಕೆ ಬಂದರೆ, ಸದಾಶಿವಗಡ ಗುಡ್ಡೆಯನ್ನು ಏರಲು, ಅಲ್ಲಿಂದ ಕಾಣುವ ಕಾರವಾರದ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಮರೆಯಬೇಡಿ.
No comments:
Post a Comment